ಬೆಂಗಳೂರು: ದತ್ತು ಪಡೆದ ನಾಯಿ ಮರಿಗೆ ವ್ಯಾಕ್ಸಿನೇಷನ್‌ ಮಾಡಿಸದೇ ಅದರ ಸಾವಿಗೆ ಕಾರಣವಾದ ವ್ಯಕ್ತಿಯ ವಿರುದ್ಧ ಪುಟ್ಟೇನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರವಿ ಸಿಂಗ್ ಎಂಬುವವರ ವಿರುದ್ಧ ಪೂರ್ಣಿಮಾ ಪ್ರಕಾಶ್ ಎಂಬುವವರು ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿದೆ.


COMMERCIAL BREAK
SCROLL TO CONTINUE READING

ಪ್ರಾಣಿ ಪ್ರಿಯರಾದ ಪೂರ್ಣಿಮಾ ಪ್ರಕಾಶ್ ಇದೇ ವರ್ಷ ಜನವರಿಯಲ್ಲಿ ತಾವು ರಕ್ಷಿಸಿದ್ದ ನಾಯಿ ಮರಿಯನ್ನು ರವಿ ಸಿಂಗ್ ದತ್ತು ಪಡೆದಿದ್ದರು. ಮಾರ್ಚ್ ತಿಂಗಳಿನಲ್ಲಿ‌ ಪೂರ್ಣಿಮಾ ನಾಯಿ ಮರಿಯ ಕುರಿತು ವಿಚಾರಿಸಿದಾಗ  ಆರೋಗ್ಯವಾಗಿ, ಫ್ರೆಂಡ್ಲಿಯಾಗಿದೆ, ವ್ಯಾಕ್ಸಿನೇಷನ್‌ ಮಾಡಿಸಿದ್ದೇನೆ ಎಂದು ರವಿ ಸಿಂಗ್ ಹೇಳಿದ್ದಾರೆ.


ಇದನ್ನೂ ಓದಿ: ನೀರಿಗಾಗಿ ಅಕ್ಕಪಕ್ಕದವರ ಗಲಾಟೆ: ಮನನೊಂದು ಗೃಹಿಣಿ ಆತ್ಮಹತ್ಯೆ!


ಇದಾದ ಬಳಿಕ ನಾಯಿ ಮರಿಗೆ ವ್ಯಾಕ್ಸಿನೇಷನ್‌ ಮಾಡಿಸದಿರುವುದನ್ನ ಗಮನಿಸಿದ ಪೂರ್ಣಿಮಾ, ವಿಚಾರಿಸಿದಾಗ ವ್ಯಾಕ್ಸಿನೇಷನ್‌ ಮಾಡಿಸಿರುವುದಕ್ಕೆ ಯಾವುದೇ ದಾಖಲೆಗಳನ್ನ ರವಿ ಸಿಂಗ್ ನೀಡಿಲ್ಲ.


ಇದನ್ನೂ ಓದಿ: ಮಂಡ್ಯ:  ವಿ.ಸಿ ನಾಲೆಯಲ್ಲಿ ಈಜಲು ಹೋಗಿ ಐವರ ದುರ್ಮರಣ


ಅಪರಿಚಿತ ಆಸಾಮಿಗಳು ನಾಯಿ ಮರಿಯನ್ನ ತೆಗೆದುಕೊಂಡು ಹೋಗಿದ್ದಾರೆ ಎಂದು ಉತ್ತರಿಸಿದ್ದಾರೆ‌. ನಾಯಿ ಮರಿಗೆ ವ್ಯಾಕ್ಸಿನೇಷನ್‌ ಮಾಡಿಸದೇ ಹಿಂಸೆ ಕೊಟ್ಟು, ಅದರ ಸಾವಿಗೆ ಕಾರಣವಾದ ರವಿ ಸಿಂಗ್ ವಿರುದ್ಧ ಪೂರ್ಣಿಮಾ ಪ್ರಕಾಶ್  ಠಾಣೆಗೆ ದೂರು ನೀಡಿದ್ದಾರೆ. ಪ್ರಾಣಿಗಳ ಮೇಲೆ ಕ್ರೌರ್ಯ ತಡೆ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್ 428ನಡಿ ರವಿಸಿಂಗ್ ಮೇಲೆ ಪ್ರಕರಣ ದಾಖಲಾಗಿದೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.